ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನ
ಪ್ರಯೋಜನಗಳು
- ಯಾವುದೇ ದಾಖಲೆಪತ್ರಗಳ ಶುಲ್ಕವಿಲ್ಲ
- ಯಾವುದೇ ಮರೆಮಾಚಲಾದ ಶುಲ್ಕಗಳಿಲ್ಲ
- ಪೂರ್ವಪಾವತಿಗೆ ಯಾವುದೇ ದಂಡವಿಲ್ಲ
- ಯಾವುದೇ ಸಂಸ್ಕರಣಾ ಶುಲ್ಕಗಳಿಲ್ಲ
- ರೂ. 7.50 ಲಕ್ಷಗಳವರೆಗೆ ಯಾವುದೇ ಮೇಲಾಧಾರ ಭದ್ರತೆ ಇಲ್ಲ
- ರೂ. 4.00 ಲಕ್ಷಗಳವರೆಗೆ ಶೂನ್ಯ ಮಾರ್ಜಿನ್
- ಲಭ್ಯವಿರುವ ಇತರ ಬ್ಯಾಂಕ್ ಗಳಿಂದ ಸಾಲ ಸೌಲಭ್ಯವನ್ನು ಸ್ವಾಧೀನಪಡಿಸಿಕೊಳ್ಳುವುದು
ವೈಶಿಷ್ಟ್ಯಗಳು
- ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ಶೈಕ್ಷಣಿಕ ಸಾಲಗಳು ಅಂದರೆ ಭಾರತದಲ್ಲಿನಿಯಮಿತ ಪೂರ್ಣ ಸಮಯದ ಪದವಿ / ಸ್ನಾತಕೋತ್ತರ ಕೋರ್ಸ್‌ಗಳು
- ಭಾರತದಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯೇತರ ಕೋರ್ಸ್ ಗಳಿಗೆ 150 ಲಕ್ಷ ರೂ.ಗಳವರೆಗಿನ ಸಾಲದ ಮೊತ್ತವನ್ನು ಪರಿಗಣಿಸಬಹುದು.
ಸಾಲದ ಪ್ರಮಾಣ
- ನರ್ಸಿಂಗ್ ಮತ್ತು ವೈದ್ಯಕೀಯೇತರ ಕೋರ್ಸ್‌ಗಳನ್ನು ಹೊರತುಪಡಿಸಿ ವೈದ್ಯಕೀಯ ಕೋರ್ಸ್‌ಗಳಿಗೆ ಗರಿಷ್ಠ ರೂ.150.00 ಲಕ್ಷ.
- ವಿದ್ಯಾರ್ಥಿಗಳ ಕೋರ್ಸ್ ಮುಗಿದ ಬಳಿಕ ಸಂಭಾವ್ಯ ಗಳಿಕೆಯನ್ನು ಆಧರಿಸಿ ವೆಚ್ಚಗಳನ್ನು ಭರಿಸುವ ಅಗತ್ಯತೆಯನ್ನು ಪರಿಗಣಿಸಲಾದ ಹಣಕಾಸು
ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನ
ಒಳಗೊಳ್ಳುವ ವೆಚ್ಚಗಳು
- ಕಾಲೇಜು / ಶಾಲೆ / ಹಾಸ್ಟೆಲ್ ಗೆ ಪಾವತಿಸಬೇಕಾದ ಶುಲ್ಕಗಳು
- ಪರೀಕ್ಷೆಯ / ಗ್ರಂಥಾಲಯದ ಶುಲ್ಕ.
- ಪುಸ್ತಕಗಳು / ಸಲಕರಣೆಗಳು / ಉಪಕರಣಗಳ ಖರೀದಿ
- ಕಂಪ್ಯೂಟರ್ / ಲ್ಯಾಪ್ ಟಾಪ್ ಖರೀದಿ.
- ಎಚ್ಚರಿಕೆ ಠೇವಣಿ / ಕಟ್ಟಡ ನಿಧಿ / ಸಂಸ್ಥೆಯ ಬಿಲ್ ಗಳು / ರಸೀದಿಗಳಿಂದ ಬೆಂಬಲಿತ ಮರುಪಾವತಿಸಬಹುದಾದ ಠೇವಣಿ.
- ಸಾಲದ ಒಟ್ಟು ಅವಧಿಗಾಗಿ ವಿದ್ಯಾರ್ಥಿ / ಸಹ-ಸಾಲಗಾರರಿಗೆ ಜೀವ ವಿಮಾ ಕಂತು
- ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಇತರ ವೆಚ್ಚಗಳು.
ವಿಮೆ
- ಎಲ್ಲಾ ವಿದ್ಯಾರ್ಥಿ ಸಾಲಗಾರರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾದ ಐಚ್ಛಿಕ ಟರ್ಮ್ ಇನ್ಶೂರೆನ್ಸ್ ಕವರ್‌ಅನ್ನು ನೀಡಲಾಗುತ್ತದೆ ಮತ್ತು ವಿಮಾ ಕಂತನ್ನು ಹಣಕಾಸಿನ ಅಂಗವಾಗಿಯೂ ಸೇರಿಸಬಹುದು.
ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನ
ವಿದ್ಯಾರ್ಥಿಯ ಅರ್ಹತೆ
- ವಿದ್ಯಾರ್ಥಿಗಳು ಭಾರತೀಯ ರಾಷ್ಟ್ರೀಯ / ಪಿಐಒ / ಒಸಿಐ ಆಗಿರಬೇಕು.
- ಎಚ್ಎಸ್ಸಿ (10 ಪ್ಲಸ್ 2 ಅಥವಾ ತತ್ಸಮಾನ) ಪೂರ್ಣಗೊಳಿಸಿದ ನಂತರ ಪ್ರವೇಶ ಪರೀಕ್ಷೆ / ಮೆರಿಟ್ ಆಧಾರಿತ ಆಯ್ಕೆ ಪ್ರಕ್ರಿಯೆಯ ಮೂಲಕ ಯುಜಿಸಿ / ಸರ್ಕಾರ / ಎಐಸಿಟಿಇ ಯಿಂದ ಅನುಮೋದಿತ ಕೋರ್ಸ್‌ಗಳಿಗೆ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು.
- ಪ್ರವೇಶದ ಮಾನದಂಡವು ಪ್ರವೇಶ ಪರೀಕ್ಷೆ ಅಥವಾ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆಯನ್ನು ಆಧರಿಸಿರದಿದ್ದರೆ, ಶಿಕ್ಷಣ ಸಾಲವು ವಿದ್ಯಾರ್ಥಿಯ ಉದ್ಯೋಗಾರ್ಹತೆ ಮತ್ತು ಸಂಬಂಧಿತ ಸಂಸ್ಥೆಯ ಖ್ಯಾತಿಯನ್ನು ಆಧರಿಸಿರಬಹುದು.
ಒಳಗೊಳ್ಳುವ ಕೋರ್ಸ್‌ಗಳು
- ಈ ಕೋರ್ಸ್‌ಅನ್ನು ಭಾರತದಲ್ಲಿ ಈ ಅಧ್ಯಯನದ ವಿಷಯಗಳಿಗೆ ಸಂಬಂಧಿಸಿದ ನಿಯೋಜಿತ ಶೈಕ್ಷಣಿಕ ಪ್ರಾಧಿಕಾರ / ನಿಯಂತ್ರಕ ಸಂಸ್ಥೆಗಳು ಅನುಮೋದಿಸಿರಬೇಕು / ಗುರುತಿಸಿರಬೇಕು.
ಒಳಗೊಳ್ಳುವ ಕೋರ್ಸ್‌ಗಳಿಗಾಗಿ ದಯವಿಟ್ಟು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ
ಲಾಭಾಂಶ
ಸಾಲದ ಪ್ರಮಾಣ | ಲಾಭಾಂಶ % |
---|---|
ರೂ.4.00 ಲಕ್ಷಗಳವರೆಗೆ | ಇಲ್ಲ |
ರೂ. 4.00 ಲಕ್ಷಕ್ಕೂ ಮೇಲ್ಪಟ್ಟು | 5% |
ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನ
ಭದ್ರತೆ
4 ಲಕ್ಷ ರೂಗಳವರೆಗೆ.
- ಪೋಷಕ(ರು) ಸಹ ಸಾಲಗಾರರಾಗಿ ಅಥವಾ ಜಂಟಿ ಸಾಲಗಾರರಾಗಿ.
- ಸಿಜಿಎಫ್ಎಸ್ಎಎಲ್ ಅಡಿಯಲ್ಲಿ ರಕ್ಷಣೆ ಪಡೆಯುವುದು ಕಡ್ಡಾಯವಾಗಿದೆ.
ರೂ.4 ಲಕ್ಷಕ್ಕಿಂತ ಹೆಚ್ಚು ಮತ್ತು ರೂ.7.50 ಲಕ್ಷಗಳವರೆಗೆ
- ಪೋಷಕ(ರು) ಸಹ ಸಾಲಗಾರರು ಅಥವಾ ಜಂಟಿ ಸಾಲಗಾರರಾಗಬಹುದು,
- ಸಿಜಿಎಫ್ಎಸ್ಇಎಲ್ ಅಡಿಯಲ್ಲಿ ರಕ್ಷಣೆ ಪಡೆಯುವುದು ಕಡ್ಡಾಯವಾಗಿದೆ.
ರೂ.7.50 ಲಕ್ಷಕ್ಕಿಂತ ಹೆಚ್ಚು
- ಪೋಷಕ(ರು) ಸಹ ಸಾಲಗಾರರಾಗಿ ಅಥವಾ ಜಂಟಿ ಸಾಲಗಾರರಾಗಿ.
- ಬ್ಯಾಂಕಿಗೆ ಸ್ವೀಕಾರಾರ್ಹವಾದ ಸೂಕ್ತ ಮೌಲ್ಯದ ಸ್ಪಷ್ಟ ಪೂರಕ ಭದ್ರತೆ.
- ಕಂತುಗಳ ಪಾವತಿಗಾಗಿ ವಿದ್ಯಾರ್ಥಿಯ ಭವಿಷ್ಯದ ಆದಾಯದ ನಿಯೋಜನೆ.
ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು, ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ ಇತರ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ಅಡವಿಡಲು ಅನುಮತಿಸಲಾದ ರಾಜ್ಯಗಳಲ್ಲಿ ಮಾತ್ರ ಕೃಷಿ ಭೂಮಿಯನ್ನು ಸ್ಪಷ್ಟ ಪೂರಕ ಭದ್ರತೆಯಾಗಿ ಪರಿಗಣಿಸಬಹುದು.
ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನ
ಬಡ್ಡಿ ದರ
ಸಾಲದ ಮೊತ್ತ (ಲಕ್ಷಗಳಲ್ಲಿ) | ಬಡ್ಡಿಯ ದರ |
---|---|
ರೂ.7.50 ಲಕ್ಷಗಳವರೆಗಿನ ಸಾಲಗಳಿಗೆ | 1 ವರ್ಷದ ಆರ್ ಬಿ ಎಲ್ ಆರ್ +1.70% |
ರೂ.7.50 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕಾಗಿ | 1 ವರ್ಷದ ಆರ್ ಬಿ ಎಲ್ ಆರ್ +2.50% |
ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು, ದಯವಿಟ್ಟು ಕೆಳಗಿನ ಲಿಂಕ್‌ಅನ್ನು ಕ್ಲಿಕ್ ಮಾಡಿ
ಶುಲ್ಕಗಳು
- ಯಾವುದೇ ಸಂಸ್ಕರಣಾ ಶುಲ್ಕಗಳಿಲ್ಲ
- ವಿ ಎಲ್ ಪಿ ಪೋರ್ಟಲ್ ಶುಲ್ಕ ರೂ. 100.00 + 18% ಜಿ ಎಸ್ ಟಿ
- ಶಿಕ್ಷಣದ ಯೋಜನೆಯಲ್ಲಿ ಯಾವುದೇ ಬದಲಾವಣೆಯಾದರೆ ಈ ಯೋಜನೆಯ ಹೊರಗಿನ ಶಿಕ್ಷಣದ ಅನುಮೋದನೆಯನ್ನು ಒಳಗೊಂಡು ನೀಡಬೇಕಾದ ಒಂದು ಬಾರಿಯ ದರಗಳು
ಸ್ಕೀಮ್ ನಿಯಮಗಳು | ಶುಲ್ಕಗಳು |
---|---|
ರೂ.4.00 ಲಕ್ಷಗಳವರೆಗೆ | ರೂ. 500/- |
ರೂ.4.00 ಲಕ್ಷಕ್ಕಿಂತ ಹೆಚ್ಚು ಮತ್ತು ರೂ.7.50 ಲಕ್ಷಗಳವರೆಗೆ | ರೂ.1,500/- |
ರೂ.7.50 ಲಕ್ಷಕ್ಕೂ ಹೆಚ್ಚು | ರೂ.3,000/- |
- ಸಲ್ಲಿಸಲಾದ ಸಾಲದ ಅರ್ಜಿಗಳನ್ನು ಸಂಸ್ಕರಿಸಲು ಸಾಮಾನ್ಯ ತಾಣವನ್ನು ನಿರ್ವಹಿಸುವ ಬಾಹ್ಯ ಸಂಸ್ಥೆಗಳ ಸೇವಾ ಪೂರೈಕೆದಾರರು ವಿಧಿಸುವ ಹೆಚ್ಚುವರಿ ಶುಲ್ಕ / ವೆಚ್ಚಗಳು ಏನಾದರೂ ಇದ್ದರೆ, ಅವನ್ನು ವಿದ್ಯಾರ್ಥಿ ಅರ್ಜಿದಾರರೇ ಪಾವತಿಸಬೇಕಾಗಬಹುದು
ಮರುಪಾವತಿಯ ಅವಧಿ
- ಶಿಕ್ಷಣದ ಅವಧಿ ಮುಗಿಯುವವರೆಗೆ ಮತ್ತು ಇನ್ನೂ ಒಂದು ವರ್ಷದಷ್ಟು ತಾತ್ಕಾಲಿಕ ಸ್ಥಗಿತತೆ.
- ಮರುಪಾವತಿಯ ಅವಧಿ: ಮರುಪಾವತಿ ಪ್ರಾರಂಭವಾದ ದಿನಾಂಕದಿಂದ 15 ವರ್ಷಗಳು
ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನ
ಸಾಲ ಒಳಗೊಳ್ಳುವ ವ್ಯಾಪ್ತಿ
- "ಭಾರತ ಮತ್ತು ವಿದೇಶಗಳಲ್ಲಿ ಅಧ್ಯಯನವನ್ನು ಮುಂದುವರಿಸಲು ಐ ಬಿ ಎ ಮಾದರಿಯ ಶಿಕ್ಷಣ ಸಾಲದ ಯೋಜನೆ"ಯ ಮಾರ್ಗಸೂಚಿಗಳಿಗೆ ಅನುಸಾರವಾಗಿ ರೂ.7.50 ಲಕ್ಷಗಳವರೆಗಿನ ಎಲ್ಲಾ ಶೈಕ್ಷಣಿಕ ಸಾಲಗಳು ನ್ಯಾಶನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ (ಎನ್ ಸಿ ಜಿ ಟಿ ಸಿ)ಯಿಂದ ಸಿ ಜಿ ಎಫ್ ಎಸ್ ಇ ಎಲ್ ಅಡಿಯಲ್ಲಿ ವ್ಯಾಪ್ತಿಗೆ ಅರ್ಹವಾಗಿವೆ.
ಇತರ ಷರತ್ತುಗಳು
- ಅಗತ್ಯತೆ / ಬೇಡಿಕೆಗೆ ಅನುಗುಣವಾಗಿ ಸಾಲವನ್ನು ಹಂತ ಹಂತವಾಗಿ, ಸಂಸ್ಥೆ / ಪುಸ್ತಕಗಳು / ಉಪಕರಣಳು/ ಸಲಕರಣೆಗಳ ಮಾರಾಟಗಾರರಿಗೆ ಸಾಧ್ಯವಾದಷ್ಟೂ ಮಟ್ಟಿಗೆ ನೇರವಾಗಿ ವಿತರಿಸಲಾಗುವುದು
- ಮುಂದಿನ ಕಂತನ್ನು ಪಡೆಯುವ ಮುನ್ನ ವಿದ್ಯಾರ್ಥಿ ಹಿಂದಿನ ಅವಧಿ / ಅರ್ಧವಾರ್ಷಿಕ ಅಂಕಪಟ್ಟಿಯನ್ನು ಹಾಜರುಪಡಿಸಬೇಕು
- ಇತ್ತೀಚಿನ ವಿಳಾಸದಲ್ಲಿ ಏನಾದರೂ ಬದಲಾವಣೆ ಇದ್ದರೆ ವಿದ್ಯಾರ್ಥಿ / ಪೋಷಕರು ಇದನ್ನು ಒದಗಿಸಬೇಕು.
- ಕೋರ್ಸ್ ಬದಲಾವಣೆ/ ಅಧ್ಯಯನವನ್ನು ಕೊನೆಗೊಳಿಸುವುದು/ ಅಧ್ಯಯನವನ್ನು ನಡುವಿನಲ್ಲಿ ಬಿಡುವುದು/ ಕಾಲೇಜು / ಸಂಸ್ಥೆಯಿಂದ ಯಾವುದೇ ಶುಲ್ಕದ ಮರುಪಾವತಿ / ಉದ್ಯೋಗ ಪಡೆದುಕೊಳ್ಳಲು ಯಶಸ್ವಿಯಾಗುವುದು / ಉದ್ಯೋಗದಲ್ಲಿ ಹಿನ್ನಡೆ / ಉದ್ಯೋಗ ಬದಲಾವಣೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿ / ಪೋಷಕರು ತಕ್ಷಣವೇ ಶಾಖೆಗೆ ಮಾಹಿತಿ ನೀಡಬೇಕು.
- ವಿದ್ಯಾರ್ಥಿಗಳು ಎನ್ ಎಸ್ ಡಿ ಎಲ್ ಇ-ಗವರ್ನೆನ್ಸ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅಭಿವೃದ್ಧಿಪಡಿಸಿದ ವಿದ್ಯಾ ಲಕ್ಷ್ಮಿ ತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ವಿದ್ಯಾ ಲಕ್ಷ್ಮಿ ತಾಣದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ಟಾರ್ ಶಿಕ್ಷಣ ಸಾಲ - ಭಾರತದಲ್ಲಿ ಅಧ್ಯಯನ
ಅವಶ್ಯಕ ದಾಖಲೆಪತ್ರಗಳು
ದಾಖಲೆಪತ್ರ | ವಿದ್ಯಾರ್ಥಿ | ಸಹ-ಅರ್ಜಿದಾರರು |
---|---|---|
ಗುರುತಿನ ಪುರಾವೆ (ಪ್ಯಾನ್ ಮತ್ತು ಆಧಾರ್) | ಹೌದು | ಹೌದು |
ವಿಳಾಸದ ಪುರಾವೆ | ಹೌದು | ಹೌದು |
ಆದಾಯದ ಪುರಾವೆ (ಐಟಿಆರ್ / (ಐಟಿಆರ್/ನಮೂನೆ6/ಸ್ಯಾಲರಿ ಸ್ಲಿಪ್ ಇತ್ಯಾದಿ) | ಇಲ್ಲ | ಹೌದು |
ಶೈಕ್ಷಣಿಕ ದಾಖಲೆಗಳು (X, XII, ಒಂದು ವೇಳೆ ಅನ್ವಯಗೊಳ್ಳುವುದಾದರೆ ಪದವಿ) | ಹೌದು | ಇಲ್ಲ |
ಪ್ರವೇಶ/ಅರ್ಹತಾ ಪರೀಕ್ಷೆಯ ಫಲಿತಾಂಶದ ಪುರಾವೆ (ಅನ್ವಯಿಸಿದರೆ) | ಹೌದು | ಇಲ್ಲ |
ಅಧ್ಯಯನ ವೆಚ್ಚಗಳ ಅನುಸೂಚಿ | ಹೌದು | ಇಲ್ಲ |
ಪಾಸ್‌ಪೋರ್ಟ್ ಗಾತ್ರದ 2 ಛಾಯಾಚಿತ್ರಗಳು | ಹೌದು | ಹೌದು |
1 ವರ್ಷದ ಬ್ಯಾಂಕ್ ಖಾತೆಯ ವಿವರಗಳು | ಇಲ್ಲ | ಹೌದು |
ವಿಎಲ್ಪಿ ಪೋರ್ಟಲ್ ಉಲ್ಲೇಖ ಸಂಖ್ಯೆ | ಹೌದು | ಇಲ್ಲ |
ವಿಎಲ್ಪಿ ಪೋರ್ಟಲ್ ಅಪ್ಲಿಕೇಶನ್ ಸಂಖ್ಯೆ | ಹೌದು | ಇಲ್ಲ |
ಪೂರಕ ಭದ್ರತಾ ವಿವರಗಳು ಮತ್ತು ದಾಖಲೆಗಳು, ಒಂದು ವೇಳೆ ಯಾವುದಾದರೂ ಇದ್ದರೆ | ಇಲ್ಲ | ಹೌದು |
ನೀವು ಇಷ್ಟಪಡಬಹುದಾದ ಉತ್ಪನ್ನಗಳು
ಸ್ಟಾರ್ ಪ್ರೊಗ್ರೆಸ್ಸಿವ್ ಎಜುಕೇಶನ್ ಲೋನ್
ಬಿಒಐ ಪ್ರಗತಿಶೀಲ ಶಿಕ್ಷಣ ಸಾಲದೊಂದಿಗೆ ಉಜ್ವಲ ಭವಿಷ್ಯದತ್ತ ಸಣ್ಣ ಹೆಜ್ಜೆಗಳನ್ನು ಇಡುವುದು.
ಇನ್ನಷ್ಟು ತಿಳಿಯಿರಿಸ್ಟಾರ್ ಪ್ರಧಾನ್ ಮಂತ್ರಿ ಕೌಶಲ್ ರಿನ್ ಯೋಜನೆ
ಬಿ ಒ ಐ ಯೊಂದಿಗೆ ನಿಮ್ಮ ವೃತ್ತಿಜೀವನವನ್ನು ನಿರ್ಮಿಸಿ.
ಇನ್ನಷ್ಟು ತಿಳಿಯಿರಿಸ್ಟಾರ್ ಶಿಕ್ಷಣ ಸಾಲ - ಕೆಲಸ ಮಾಡುವ ವೃತ್ತಿಪರರು
ಲಾಭದಾಯಕವಾಗಿ ಕೆಲಸ ಮಾಡುವ ವೃತ್ತಿಪರರಿಗೆ ಶಿಕ್ಷಣ ಸಾಲಗಳು
ಇನ್ನಷ್ಟು ತಿಳಿಯಿರಿ