ಎಸ್.ಸಿ.ಎಲ್.ಸಿ.ಎಸ್.ಎಸ್

SCLCSS

ಸ್ಪೆಶಲ್ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಸ್ಕೀಮ್ (ಎಸ್‌ ಸಿ ಎಲ್‌ ಸಿ ಎಸ್‌ ಎಸ್‌) ಅನ್ನು ರಾಷ್ಟ್ರೀಯ ಎಸ್‌ ಸಿ-ಎಸ್‌ ಟಿ ಹಬ್ ಅಡಿಯಲ್ಲಿ ಪರಿಚಯಿಸಲಾಗಿದೆ. ಯೋಜನೆಯನ್ನು ಭಾರತ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು ರಾಷ್ಟ್ರೀಯ ಎಸ್‌ ಸಿ/ಎಸ್‌ ಟಿ ಹಬ್ (ಎಸ್‌ ಸಿ ಎಲ್‌ ಸಿ ಎಸ್‌ ಎಸ್‌) ಮುಖಾಂತರ ನಿರ್ವಹಿಸುತ್ತದೆ ಮತ್ತು ಯೋಜನೆಯು 31.03.2026ರವರೆಗೆ ಮಾನ್ಯವಾಗಿರುತ್ತದೆ.

SCLCSS

ಮಹತ್ವಾಕಾಂಕ್ಷೆಯ ಉದ್ಯಮಿಗಳಿಂದ ಹೊಸ ಉದ್ಯಮಗಳ ಸ್ಥಾಪನೆಯನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಸಂಗ್ರಹಣೆಯಲ್ಲಿ ಎಸ್‌ ಸಿ/ಎಸ್‌ ಟಿ ಉದ್ಯಮಿಗಳ ಹೆಚ್ಚಿನ ಭಾಗವಹಿಸುವಿಕೆಗಾಗಿ ಅಸ್ತಿತ್ವದಲ್ಲಿರುವ ಎಂ ಎಸ್‌ ಇಗಳ ಸಾಮರ್ಥ್ಯ ವರ್ಧನೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

  • ಎಸ್‌ ಸಿ/ಎಸ್‌ ಟಿ ಸೂಕ್ಷ್ಮ ಮತ್ತು ಸಣ್ಣ ಘಟಕಗಳಿಗೆ ಪ್ರಧಾನ ಸಾಲ ನೀಡುವ ಸಂಸ್ಥೆಯಿಂದ ಅವಧಿ ಸಾಲಕ್ಕಾಗಿ ಸ್ಥಾವರ ಮತ್ತು ಯಂತ್ರೋಪಕರಣಗಳು ಮತ್ತು ಸಲಕರಣೆಗಳನ್ನು ಖರೀದಿಸಲು ಎಸ್‌ ಸಿ ಎಲ್‌ ಸಿ ಎಸ್‌ ಎಸ್‌ ಅನ್ವಯಿಸುತ್ತದೆ. ಅಸ್ತಿತ್ವದಲ್ಲಿರುವ ಮತ್ತು ಹೊಸ ಘಟಕಗಳು ಎರಡೂ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ.
  • ಉತ್ಪಾದನೆ ಮತ್ತು ಸೇವಾ ವಲಯ (15.11.2021 ರಿಂದ ಅನ್ವಯವಾಗುವಂತೆ ಸೇರಿಸಲಾಗಿದೆ) ಈ ಯೋಜನೆಯಡಿ ಅರ್ಹವಾಗಿದೆ.
  • ಪಿ ಎಲ್‌ ಐನಿಂದ ಅವಧಿ ಸಾಲದ ಮೂಲಕ ಸ್ಥಾವರ ಮತ್ತು ಯಂತ್ರೋಪಕರಣಗಳು ಹಾಗೂ ಸಲಕರಣೆಗಳನ್ನು ಖರೀದಿಸಿದ ಎಸ್‌ ಸಿ/ಎಸ್‌ ಟಿ ಎಂ ಎಸ್‌ ಇಗಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ. ( ಗರಿಷ್ಠ ಮಿತಿ ರೂ.1.00 ಕೋಟಿ).
  • ಘಟಕ ಮತ್ತು ಯಂತ್ರೋಪಕರಣಗಳು ಹಾಗೂ ಸಲಕರಣೆಗಳ ಖರೀದಿಗೆ ಮಂಜೂರಾದ ಅವಧಿ ಸಾಲದ (ಗರಿಷ್ಠ ರೂ.25.00 ಲಕ್ಷ) @ 25% ಕ್ಯಾಪಿಟಲ್ ಸಬ್ಸಿಡಿ ಈ ಯೋಜನೆಯಡಿ ಲಭ್ಯವಿರುತ್ತದೆ.
  • ಆನ್‌ಲೈನ್ ಅರ್ಜಿ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ ಮತ್ತು ಪರಿಷ್ಕೃತ ನಿಬಂಧನೆಗಳಿಗೆ ಅನುಗುಣವಾಗಿ ತಿದ್ದುಪಡಿ ಮಾಡಲಾಗಿದೆ.
SCLCSS