BOI Savings Plus Scheme


  • (01-12-2021) ರಿಂದ ಜಾರಿಗೆಗೆ ಬಂದಿದೆ
  • ಬಿಓಐ ಸೇವಿಂಗ್ಸ್ ಪ್ಲಸ್ ಎಂಬುದು ಉಳಿತಾಯ ಬ್ಯಾಂಕ್ ಖಾತೆ ಮತ್ತು ಅವಧಿ ಠೇವಣಿ ಖಾತೆಗಳ ಮಿಶ್ರಣವಾಗಿದೆ.
  • ಇದು ಲಿಕ್ವಿಡಿಟಿಗೆ ಧಕ್ಕೆಯಾಗದಂತೆ ಗ್ರಾಹಕರ ಗಳಿಕೆಯನ್ನು ಗರಿಷ್ಠಗೊಳಿಸುವ ಗುರಿಯನ್ನು ಹೊಂದಿದೆ
  • ಎಸ್ಬಿ ಭಾಗದಲ್ಲಿ ಸೂಚಿಸಲಾದ ಕನಿಷ್ಠ ಉಳಿತಾಯವನ್ನು ನಿರ್ವಹಿಸದೇ ಹೋದರೆ, ಬ್ಯಾಂಕ್‌ನ ಸೂಚನೆಗಳ ದಂಡವನ್ನು ವಿಧಿಸಲಾಗುತ್ತದೆ.
  • ಎಸ್.ಬಿ ಭಾಗದ ಮೇಲಿನ ಬಡ್ಡಿಯ ದರವು ಸಾಮಾನ್ಯ ಎಸ್ಬಿ ಠೇವಣಿಗಳಿಗೆ ಅನ್ವಯಿಸುತ್ತದೆ, ಆದರೆ ಎಸ್ಡಿಆರ್/ಡಿಬಿಡಿ ಭಾಗದ ಮೇಲಿನ ಬಡ್ಡಿಯ ದರವು ಪ್ರತಿ ಠೇವಣಿಯನ್ನು ಇರಿಸಲಾಗಿರುವ ಅವಧಿಯನ್ನು ಮತ್ತು ಠೇವಣಿ ಇಡುವ ಅಥವಾ ನವೀಕರಿಸಿದ ದಿನಾಂಕದಂದು ಅಂದಿನ ಬಡ್ಡಿದರವನ್ನು ಅವಲಂಬಿಸಿರುತ್ತದೆ.
  • ಪ್ರಸ್ತುತ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳ ಪ್ರಕಾರ ಟಿಡಿಎಸ್ ಮಾನದಂಡಗಳು ಅನ್ವಯವಾಗುತ್ತವೆ.
  • ಎಸ್ಬಿ ಭಾಗದಲ್ಲಿ ಚಾಲ್ತಿಯಲ್ಲಿರುವ ಬ್ಯಾಂಕಿಂಗ್ ಮಾನದಂಡಗಳ ಪ್ರಕಾರ ನಾಮನಿರ್ದೇಶನ ಸೌಲಭ್ಯವು ಲಭ್ಯವಿದೆ, ಇದನ್ನೇ ಸ್ವಯಂಚಾಲಿತವಾಗಿ ಟಿಡಿ ಭಾಗಕ್ಕೂ ಪರಿಗಣಿಸಲಾಗುತ್ತದೆ.
  • ಎಸ್ಬಿ ಡೈಮಂಡ್ ಖಾತೆ ಯೋಜನೆಯ ಎಲ್ಲಾ ಪ್ರಯೋಜನಗಳು ಕೂಡಾ ಈ ಖಾತೆಗೆ ಅನ್ವಯಿಸುತ್ತವೆ.
  • ಎಸ್ಬಿ ಭಾಗದಲ್ಲಿ ಕನಿಷ್ಠ ಉಳಿತಾಯ ರೂ.1,00,000/- ಮತ್ತು ಟರ್ಮ್ ಡೆಪಾಸಿಟ್ ಭಾಗದಲ್ಲಿ ಕನಿಷ್ಠ ಉಳಿತಾಯ ರೂ.25,000/- ಆಗಿದೆ.
  • ಎಸ್ಬಿ ಭಾಗದಲ್ಲಿ ರೂ.1,00,000/- ಕ್ಕಿಂತ ಹೆಚ್ಚಿನ ಮೊತ್ತವನ್ನು ಎಸ್ಡಿಆರ್ ಅಥವಾ ಡಿಬಿಡಿ ಭಾಗಕ್ಕೆ ಪ್ರತಿದಿನ ರೂ.25,000/-ದ ಗುಣಾಂಕಗಳಲ್ಲಿ ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ.
  • ಎಸ್ಡಿಆರ್ ಭಾಗದಲ್ಲಿ, ಗ್ರಾಹಕರ ಆಯ್ಕೆಯ ಪ್ರಕಾರ 15 ದಿನಗಳಿಂದ 179 ದಿನಗಳವರೆಗೆ ಯಾವುದೇ ಅವಧಿಗೆ ಹಣವನ್ನು ಹೂಡಿಕೆ ಮಾಡಬಹುದು. ಡಿಬಿಡಿ ಭಾಗದಲ್ಲಿ, ಗ್ರಾಹಕರ ಆಯ್ಕೆಯ ಪ್ರಕಾರ 180 ದಿನಗಳಿಂದ 364 ದಿನಗಳವರೆಗೆ ಹಣವನ್ನು ಹೂಡಿಕೆ ಮಾಡಬಹುದು.
  • ಮುಕ್ತಾಯದ ನಂತರ, ಎಸ್ಡಿಆರ್ / ಡಿಬಿಡಿ ಭಾಗದ ಅಸಲನ್ನು ಸಮಾನ ಅವಧಿಗೆ ಸ್ವಯಂ-ನವೀಕರಿಸಲಾಗುತ್ತದೆ, ಆದರೆ ಬಡ್ಡಿಯನ್ನು ಸಂಬಂಧಪಟ್ಟ ನಿಗದಿತ ದಿನಾಂಕದಂದು ಎಸ್ಬಿ ಭಾಗಕ್ಕೆ ಜಮಾ ಮಾಡಲಾಗುತ್ತದೆ. ಇದನ್ನು ಹಿಂಪಡೆಯದಿದ್ದರೆ, ಗ್ರಾಹಕರ ಆಯ್ಕೆಯ ಮೇಲಿನ ಪ್ರಕಾರ ಗ್ರಾಹಕರು ಈಗಾಗಲೇ ನಿಗದಿಪಡಿಸಿದ ಅವಧಿಗೆ ರೂ.25,000/- ರ ಗುಣಲಕ್ಷಣಗಳಲ್ಲಿ ಮತ್ತೆ ಎಸ್ಡಿಆರ್ / ಡಿಬಿಡಿಗೆ ವರ್ಗಾಯಿಸಲಾಗುತ್ತದೆ.
  • ಒಂದು ವೇಳೆ ಎಸ್ಬಿ ಭಾಗದಲ್ಲಿನ ಬಾಕಿ ಮೊತ್ತವು ಖಾತೆಯ ದ್ರವ್ಯತೆ ಅಗತ್ಯತೆಗಳನ್ನು ಪೂರೈಸಲು ಅಗತ್ಯವಾದ ಮಟ್ಟಕ್ಕಿಂತಲೂ ಕಡಿಮೆ ಇದ್ದರೆ, ಎಸ್ಬಿ ಪ್ಲಸ್ ಭಾಗದಿಂದ ಬರುವ ಹಣವನ್ನು ಎಸ್ಬಿ ಭಾಗಕ್ಕೆ ಪ್ರತಿದಿನ ರೂ.1,000/-ರ ಗುಣಾಂಕಗಳಲ್ಲಿ ಸ್ವಯಂಚಾಲಿತವಾಗಿ ಸೇರಿಸಲಾಗುತ್ತದೆ. ಇದು ಮೆಚ್ಯೂರಿಟಿಗೆ ಮುಂಚಿತವಾಗಿ ಪಾವತಿಗೆ ಸಮಾನವಾಗಿದ್ದರೂ, ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ. ಗ್ರಾಹಕರು ಹೆಚ್ಚಿನ ನಷ್ಟವನ್ನು ಭರಿಸಬೇಕಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಇತ್ತೀಚಿನ ಎಸ್ಡಿಆರ್/ಡಿಬಿಡಿ ಠೇವಣಿಯನ್ನು ಮುಕ್ತಾಯಕ್ಕೂ ಮೊದಲು (ರೂ.25,000 / -ರ ಗುಣಾಂಕಗಳಲ್ಲಿ) ಮುಚ್ಚಲಾಗುತ್ತದೆ (ಅಂದರೆ ಎಲ್ಐಎಫ್ಒ ತತ್ವವನ್ನು ಅನ್ವಯಿಸಲಾಗುತ್ತದೆ).

ಈ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು
ದಯವಿಟ್ಟು ‘BOI Savings Plus Scheme’ಎಂಬ ಎಸ್ಎಂಎಸ್ ಅನ್ನು -8467894404 ಸಂಖ್ಯೆಗೆ ಕಳುಹಿಸಿ
8010968370 ಸಂಖ್ಯೆಗೆ ಒಂದು ಮಿಸ್ಡ್ ಕಾಲ್ ನೀಡಿ


*ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ನಿಮ್ಮ ಹತ್ತಿರದ ಶಾಖೆಯನ್ನು ಸಂಪರ್ಕಿಸಿ

BOI-Savings-Plus-Scheme